ಭಿರಡಿ ಗ್ರಾಮದಲ್ಲಿ ರೈತರಿಂದ ಶ್ರೀ ಮುರಸಿದ್ಧೇಶ್ವರ ಹಾಗೂ ಚಿಂಚಲಿ ಶ್ರೀ ಮಾಯಕ್ಕಾದೇವಿಗೆ ವಿಶೇಷ ಪೂಜೆ

 

ಶ್ರೀ ಮುರಸಿದ್ಧೇಶ್ವರ ದೇವಸ್ಥಾನದ ಭಿರಡಿ.

ಶ್ರೀ ಮಾಯಕ್ಕಾದೇವಿ ಚಿಂಚಲಿ.

ಭಿರಡಿ ಗ್ರಾಮದಲ್ಲಿ ರೈತರಿಂದ ಶ್ರೀ ಮುರಸಿದ್ಧೇಶ್ವರ ಹಾಗೂ ಚಿಂಚಲಿ ಶ್ರೀ ಮಾಯಕ್ಕಾದೇವಿಗೆ ವಿಶೇಷ ಪೂಜೆ

ಭಿರಡಿ, ನ. 9 — ಭಿರಡಿ ಗ್ರಾಮದ ರೈತರು ಇಂದು ಗ್ರಾಮ ದೇವತಾ ಶ್ರೀ ಮುರಸಿದ್ಧೇಶ್ವರ ದೇವಸ್ಥಾನದಲ್ಲಿ ಹಾಗೂ ಚಿಂಚಲಿ ಶ್ರೀ ಮಾಯಕ್ಕಾದೇವಿ ದೇವಾಲಯದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಿದರು. ಇತ್ತೀಚೆಗೆ ನಡೆದ ಗುರ್ಲಾಪುರ್ ರೈತ ಹೋರಾಟ ಯಶಸ್ವಿಯಾಗಿ ಅಂತ್ಯಗೊಂಡು, ಅದರ ಪರಿಣಾಮವಾಗಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯ ಮಾಲಿಕರು ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಿದ ಹಿನ್ನೆಲೆ ರೈತರು ದೇವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯದ ಎಲ್ಲಾ ರೈತರಿಗೆ, ಜೊತೆಗೆ ಹೋರಾಟಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡಿದ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ರೈತರ ಜೀವನ ಸುಖಶಾಂತಿಯುತವಾಗಲಿ ಎಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು, ರೈತರು ಹಾಗೂ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Comments

Popular posts from this blog

"ಇನ್ನೂ ಕರಗದ ಸಕ್ಕರೆ ಕಾರ್ಖಾನೆ ಮಾಲೀಕರ ಮನಸ್ಸು!"

" ಮನೆ ಮನೆಗೆ ಪೊಲೀಸ್ ಅಭಿಯಾನ" ಪೊಲೀಸ ಇಲಾಖೆಯ ಜಾಗೃತಿ ಅಭಿಯಾನ"